Thursday, 11 April 2019

ಬಿಟ್ಟು ಬಿಡು

ಹೇಳಲು ಬಯಸಿರುವುದನು ಹೇಳಿರುವೆ,
ಉಳಿದ ಅಲ್ಪ ಉಳಿದಿದೆ ಉಳಿಯಲಿಬಿಡು,

ಸಾಗಿ ಬಂದೆವು ಜತೆಯಾಗಿ ಬಹು ದೂರ
ಸಾಗುವದು ಇತ್ತು ಬಲು, ಯಾನ ಇರಲಿಬಿಡು

ದಹಿಸಿತು ದಹನದಿ ದಾಹತೀರೋವರೆಗೂ,
ಬೆಂದರೂ  ಮಿಡಿತವಿದೆ, ಮಿಡಿಯಲಿಬಿಡು

ಬಯಕೆ ಇನ್ನೂ ಇದೆ ಬರುವುದೆಂದು ಆ
ಘಳಿಗೆ, ಬರದು ಅದು ಹೋಗಲಿಬಿಡು