Friday, 22 March 2019

ವಿರಹಿ

ಏಕಾಂಗಿಯಾಗಿ ಪಯಣಿಸುತ್ತಿರುವೆ.
ಸಂಗಾತಿಯಿಲ್ಲ, ಸಹಚರನಿಲ್ಲ.
ಮೌನದಿ ಮಿಂದು ಬೆಯುತ್ತಿರುವೆ,
ಆಟವಿಲ್ಲ, ಕೂಟವಿಲ್ಲ,
ಸುಡುವ ವಿರಹ
ಕೇಳುವವರಾರು, ನೋಡುವರಾರು?
ನಡುವೆ ದಾರಿಯಲಿ ಸುಳಿವ ತಂಗಾಳಿಯಂತೆ
ಯಾರಾದರೂ ಬರಬಾರದೇ,
ಬಂದು ನನ್ನ ತನು ತಣಿಯವಂತೆ
ಏನಾದರೂ ಹೂಡಬಾರದೇ.

ಓ ಕಾಮಣ್ಣ ಹೋಳಿಯಲ್ಲಿ ನಿನ್ನ ದಹಿಸಿ ಸಂಭ್ರಮಿಸಿದೆನೆಂದು
ನನಗೀ ಶಾಪ ಇಟ್ಟೆಯಾ?
ಅಮಿತ ಆಸೆ, ಅಪರಿಮಿತ ತೃಷೆ ನನಗೆಯೇ ಕೊಟ್ಟೆಯಾ?
ನನ್ನ ದಾಹ ತೀರಿಸುವಂತ ಇನ್ನೊಬ್ಬ ಇಂಥ ಶಾಪಗ್ರಸ್ತನ
ನನ್ನೆಡೆಗೆ ಕಳಿಸೆಯಾ?

ವಿಪರ್ಯಾಸ

🍋🍋🍋🍋🍋🍋🍋🍋🍋🍋🍋


ನಿಂಬೆ ಎಷ್ಷೇ ಹುಳಿಯಾದರೂ,
ಅದರ ಬೀಜ ಅದಕ್ಕಿಂತ ‌ಕಹಿ |

ನಿಂಬೆ ಎಷ್ಷೇ ಹುಳಿಯಾದರೂ,
ಅದರ ಬೀಜ ಅದಕ್ಕಿಂತ ‌ಕಹಿ |

ನೀವು ಎಷ್ಟೇ ಬೆಳ್ಳಗಿದ್ದರೂ,
ನಿಮ್ಮ ಬೀಜ ನಿಮಗಿಂತ ಕರಿ ||


🌑🌑🌑🌑🌑🌑🌑🌑🌑🌑🌑

ಹೋಳಿ

ಲುಂಗಿ ಉಟ್ಟು
ಅಂಗಿ ಬಿಚ್ಚಿ
ಅಂಗಕ್ಕೆಲ್ಲ
ರಂಗು ಹಚ್ಚಿ
ಅಂಗಳದಿ
ರಂಗಿನಾಟವ ಒಂದು
ಗುಂಗಿನಲ್ಲಿ
ಮಂಗನಂತೆ ನಿನ್ನ
ಸಂಗ
ಅಂಗಾಂಗ ಉಜ್ಜಿ ಆಡುವ ಆಸೆ