ಏಕಾಂಗಿಯಾಗಿ ಪಯಣಿಸುತ್ತಿರುವೆ.
ಸಂಗಾತಿಯಿಲ್ಲ, ಸಹಚರನಿಲ್ಲ.
ಮೌನದಿ ಮಿಂದು ಬೆಯುತ್ತಿರುವೆ,
ಆಟವಿಲ್ಲ, ಕೂಟವಿಲ್ಲ,
ಸುಡುವ ವಿರಹ
ಕೇಳುವವರಾರು, ನೋಡುವರಾರು?
ನಡುವೆ ದಾರಿಯಲಿ ಸುಳಿವ ತಂಗಾಳಿಯಂತೆ
ಯಾರಾದರೂ ಬರಬಾರದೇ,
ಬಂದು ನನ್ನ ತನು ತಣಿಯವಂತೆ
ಏನಾದರೂ ಹೂಡಬಾರದೇ.
ಓ ಕಾಮಣ್ಣ ಹೋಳಿಯಲ್ಲಿ ನಿನ್ನ ದಹಿಸಿ ಸಂಭ್ರಮಿಸಿದೆನೆಂದು
ನನಗೀ ಶಾಪ ಇಟ್ಟೆಯಾ?
ಅಮಿತ ಆಸೆ, ಅಪರಿಮಿತ ತೃಷೆ ನನಗೆಯೇ ಕೊಟ್ಟೆಯಾ?
ನನ್ನ ದಾಹ ತೀರಿಸುವಂತ ಇನ್ನೊಬ್ಬ ಇಂಥ ಶಾಪಗ್ರಸ್ತನ
ನನ್ನೆಡೆಗೆ ಕಳಿಸೆಯಾ?
ಸಂಗಾತಿಯಿಲ್ಲ, ಸಹಚರನಿಲ್ಲ.
ಮೌನದಿ ಮಿಂದು ಬೆಯುತ್ತಿರುವೆ,
ಆಟವಿಲ್ಲ, ಕೂಟವಿಲ್ಲ,
ಸುಡುವ ವಿರಹ
ಕೇಳುವವರಾರು, ನೋಡುವರಾರು?
ನಡುವೆ ದಾರಿಯಲಿ ಸುಳಿವ ತಂಗಾಳಿಯಂತೆ
ಯಾರಾದರೂ ಬರಬಾರದೇ,
ಬಂದು ನನ್ನ ತನು ತಣಿಯವಂತೆ
ಏನಾದರೂ ಹೂಡಬಾರದೇ.
ಓ ಕಾಮಣ್ಣ ಹೋಳಿಯಲ್ಲಿ ನಿನ್ನ ದಹಿಸಿ ಸಂಭ್ರಮಿಸಿದೆನೆಂದು
ನನಗೀ ಶಾಪ ಇಟ್ಟೆಯಾ?
ಅಮಿತ ಆಸೆ, ಅಪರಿಮಿತ ತೃಷೆ ನನಗೆಯೇ ಕೊಟ್ಟೆಯಾ?
ನನ್ನ ದಾಹ ತೀರಿಸುವಂತ ಇನ್ನೊಬ್ಬ ಇಂಥ ಶಾಪಗ್ರಸ್ತನ
ನನ್ನೆಡೆಗೆ ಕಳಿಸೆಯಾ?
Very nice
ReplyDelete